ನಾ ಕಸ್ತೂರಿ ಯವರ ಕನ್ನಡ ಹಾಸ್ಯ ಬರಹಗಳು ಒಂದು ಸಂಕಲನ
ನಾ ಕಸ್ತೂರಿ ಯವರ ಕನ್ನಡ ಹಾಸ್ಯ ಬರಹಗಳು ಒಂದು ಸಂಕಲನ
ನಾ. ಕಸ್ತೂರಿ
https://sites.google.com/view/kasturikannada
ನಾ. ಕಸ್ತೂರಿಯವರ ಜನನ, ಕುಟುಂಬ ಮತ್ತು ಪರಿಸರ :
ಸ್ವಾತಂತ್ರ ಪೂರ್ವ ಭಾರತದಲ್ಲಿ ತಿರುವಾಂಕೂರು ಹಾಗೂ ಕೊಚ್ಚಿನ್ ಎರಡೂ ಪ್ರತ್ಯೇಕ ಸಂಸ್ಥಾನಗಳಾಗಿದ್ದವು. ಶ್ರೀಯುತರು ಉತ್ತರ ತಿರುವಾಂಕೂರಿಗೆ ಸೇರಿದ ತಿರುಪುಣಿತ್ತುರ್ ಎಂಬ ಹಳ್ಳಿಯಲ್ಲಿ ೧೮೯೭ ಡಿಸೆಂಬರ್ ೨೫ ಕ್ರಿಸ್ಮಸ್ ದಿನ ಜನಿಸಿದರು. ಈ ಹಳ್ಳಿಯ ವಿಶೇಷತೆ ಎಂದರೆ ಪಾರ್ಥಸಾರಥಿ ದೇವಸ್ಥಾನ. ದೇವರ ಮೂರ್ತಿಯನ್ನು ಅರ್ಜುನನೇ ಪ್ರತಿಷ್ಠಾಪಿಸಿ ಆರಾಧಿಸಿದ್ದನೆಂಬ ಸ್ಥಳದ ಐತಿಹ್ಯವಿದೆ. ಈ ಊರು ಲೇಖಕರ ತಾಯಿಯವರ ಮುತ್ತಾತನ ತಂದೆಯವರಾದ ಶ್ರೀ ರಂಗನಾಥರ ಊರು. ಕಸ್ತೂರಿಯವರ ತಾತನವರೇ “ಪಾರ್ಥಸಾರಥಿ ದೇವಾಲಯ”ದ ಪಾರುಪತ್ತೇಗಾರರಾಗಿದ್ದರು. ಇವರು ಜನ್ಮತಃ, ವಿಶೇಷವಾಗಿ ಕೈ ಹಾಗೂ ಕಾಲುಗಳಲ್ಲಿ ಆರು ಬೆರಳುಗಳನ್ನು ಹೊಂದಿದ್ದರು. ಅಂದರೆ ಒಟ್ಟು ೨೪ ಬೆರಳುಗಳು. ಅಜ್ಜಿಯೇ (ತಾಯಿಯ ತಾಯಿ) ಅಪಶಕುನ ಎಂದು ಭಾವಿಸಿ, ೨ ಕೈ ಮತ್ತು ಪಾದಗಳಲ್ಲಿದ್ದ ಅನವಶ್ಯಕವಾಗಿ ತೋರಿದ ಆ ಹೆಚ್ಚುವರಿ ನಾಲ್ಕು ಬೆರಳುಗಳನ್ನು ತಜ್ಞ ಶಸ್ತçವೈದ್ಯರಂತೆ ಕತ್ತರಿಸಿದರು. ಅದರ ಪರಿಣಾಮವಾಗಿ ಗಾಯ ನಂಜಾಗ ತೊಡಗಿತು. ಹುಟ್ಟಿ ಇನ್ನೂ ಎರಡು ವಾರವೂ ಸಹ ಆಗಿರದ ಕಸ್ತೂರಿ, ಮೃತ್ಯುವಿಗೆ ಸಮೀಪವಾಗಿ ವಾಪಾಸಾಗಿದ್ದರು. ಅಜ್ಜಿಗೆ ಈ ಕತ್ತರಿ ಪ್ರಯೋಗದ ನಂತರ ತಿಳಿಯಿತಂತೆ ಆರು ಬೆರಳುಗಳು ಇರುವುದು ಅದೃಷ್ಟದ ಸಂಕೇತ ಎಂದು. ನಂತರ ತಿರುಪತಿಗೆ ತಪ್ಪುದಂಡ ಸಲ್ಲಿಸಿದರು.”
ನಾ.ಕಸ್ತೂರಿಯವರ ಕುಟುಂಬ ದೈವ ಹಾಗೂ ಆಧ್ಯಾತ್ಮದ ಕಡೆ ಒಲವಿರುವ ಬಡ ಅಯ್ಯರ್ ಬ್ರಾಹ್ಮಣ ಕುಟುಂಬ. ಇವರ ಮೂಲ ಮನೆತನದ ಭಾಷೆ ತಮಿಳು. ಕೇರಳದಲ್ಲಿ ಇದ್ದುದರಿಂದ ಮಲಯಾಳಂ ಭಾಷೆಯನ್ನು ಪರಿಸರ ಭಾಷೆಯನ್ನಾಗಿ ಕಲಿತರು. ನಾ. ಕಸ್ತೂರಿಯವರನ್ನು ಅವರ ತಾಯಿಯ ಅಮ್ಮನೇ ಹೆರಿಗೆ ಮಾಡಿಸಿದ ಸೂಲಗಿತ್ತಿ. ತಂದೆ ನಾರಾಯಣರಂತೆ ಕಪ್ಪುಬಣ್ಣವನ್ನು ಹೊಂದಿದ್ದು, ಅಜ್ಜಿಯ ಆಸೆಯಂತೆ ಮಗು ಗುಂಡುಗುAಡಾಗಿ ಇರದೆ, ದುರ್ಬಲವಾಗಿ ಸೊರಗಿದಂತೆ ಇತ್ತು. ಕುಟುಂಬದವರಿಗೆ ಗಂಡುಮಗು ಆದ್ದರಿಂದ ಕಪ್ಪು ಬಣ್ಣದ ಚಿಂತೆ ಇರಲಿಲ್ಲ. ಆದರೆ, ತೀರ ದುರ್ಬಲವಾಗಿದಿದ್ದು ಅವರಿಗೆ ಚಿಂತೆಯಾಯಿತು. ಅದಕ್ಕೋಸ್ಕರ ಅಜ್ಜಿ ನಾರು, ಬೇರು, ಆಯುರ್ವೇದ ಇತ್ಯಾದಿ ಸಿದ್ಧೌಷಧಿಗಳನ್ನು ಮಾಡಿದರೂ ಸಹ ಮಗು ದುರ್ಬಲವಾಗಿ ಬೆಳೆಯಿತು.
ನಾ. ಕಸ್ತೂರಿಯವರ ತಂದೆ ಹಾಗೂ ತಾಯಿ ಅವರ ಮದುವೆ ನಡೆದಾಗ ತಂದೆಯ ವಯಸ್ಸು ೧೮ ವರ್ಷ, ತಾಯಿಯದು ೧೨ ವರ್ಷ, ಇದೊಂದು ರೀತಿಯ ಬಾಲ್ಯವಿವಾಹ. ಕಸ್ತೂರಿಯವರು ಹುಟ್ಟಿ ಹನ್ನೆರಡು ದಿನಗಳಾಗಿದ್ದಾಗ ನಾಮಕರಣವನ್ನು ಮಾಡುತ್ತಾರೆ. “ಇವರ ಸಂಪ್ರದಾಯದ ಪ್ರಕಾರ ತಾತನ ಹೆಸರನ್ನು ಇಡುವುದು ಸಂಪ್ರದಾಯ. ಅದರ ಪ್ರಕಾರ ತಾತನ ಹೆಸರು `ರಂಗನಾಥ' ಈ ಹೆಸರ ಮುಂದೆ `ಕಸ್ತೂರಿ' ಎಂಬ ಹೆಸರನ್ನು ಸೇರಿಸಿ, `ಕಸ್ತೂರಿ ರಂಗನಾಥ' ಜೊತೆಯಲ್ಲಿ ತಂದೆಯ ಹೆಸರು ನಾರಾಯಣ ಹಾಗೂ ಕೊನೆಯಲ್ಲಿ ಜಾತಿ ಸೂಚಕ ಶರ್ಮ ಎಂದು ಹೆಸರಿಟ್ಟರು. ಹೀಗೆ ಪೂರ್ತಿ ಹೆಸರು `ಕಸ್ತೂರಿ ರಂಗನಾಥ ನಾರಾಯಣ ಶರ್ಮ” ಎಂದಾಯಿತು.
ಇದೊಂದು ರೀ
Name of presentation
Name of project
Name of video
Get in touch at [email address]